ರೇಷ್ಮಾ ಶಾಲೆಗೆ ಬಂದಳು!
ರೇಷ್ಮಾ ಏಳು ವರ್ಷದ ಹುಡುಗಿ.ರೇಷ್ಮಾ ಹುಟ್ಟಿದ್ದು ,ಬೆಳೆದಿದ್ದು ಎಲ್ಲ ಕುಂದಾಪುರದಲ್ಲೇ!.ಕುಂದಾಪುರದ ಕೆ.ಎಸ್ ಆರ್.ಟಿ.ಸಿ ಬಸ್ ನಿಲ್ದಾಣದ ಎದುರುಗಡೆ ಇರುವ ಖಾಲಿ ಜಾಗದಲ್ಲಿ ನೀಲಿ ಬಣ್ಣದ ಪ್ಲಾಸ್ಟಿಕ್ ಹೊದಿಕೆಯ ಟೆಂಟು ಹಾಕಿಕೊಂಡು ಇವರ ಕುಟುಂಬ ವಾಸಿಸುತ್ತದೆ.ಇವರಿಗೆ ಆಧಾರ್ ಕಾರ್ಡು,ರೇಷನ್ ಕಾರ್ಡು ಯಾವುದೂ ಇಲ್ಲ .
ಮೊನ್ನೆ ನಾವು ಈ ಟೆಂಟುಗಳಿಗೆ ಭೇಟಿ ನೀಡಿದಾಗ ಅಲ್ಲಿ ಶಾಲೆಯಲ್ಲಿರಬೇಕಾದ ಮಕ್ಕಳು ಇರುವುದು ಗೊತ್ತಾಯಿತು.ಅವರಲ್ಲಿ ಒಬ್ಬಳು ರೇಷ್ಮಾ.ನಮ್ಮ ಜೊತೆ ಶಾಲೆಗೆ ಬರುತ್ತೀಯಾ ಎಂದು ಕೇಳಿದಾಗ ರೇಷ್ಮಾಳ ಮುಖದಲ್ಲಿ ಅಷ್ಟೊತ್ತಿನವರೆಗೂ ಇಲ್ಲದ ಮಂದಹಾಸ ಬಂದು ನೆಲೆಸಿತು.ನಾವವಳ ಕೈ ಹಿಡಿದು ಕರೆದುಕೊಂಡು ಬರಬೇಕೆನ್ನುವಷ್ಟರಲ್ಲಿ ಅವಳೇ ತನ್ನ ಕೈಗಳನ್ನು ನೀಡಿದಳು.ಶಾಲೆಯ ದಿಕ್ಕಿಗೆ ನಮ್ಮನ್ನು ಕರೆದುಕೊಂಡು ಹೋದಳು..
ಶಾಲೆಯ ಕೋಣೆಯೊಳಗಿನ ಮಕ್ಕಳನ್ನೂ ಅಲ್ಲಿರುವ ಆಟಿಕೆಗಳನ್ನೂ ಕಂಡ ರೇಷ್ಮಾಳ ಮುಖದಲ್ಲಿನ ಮಂದಹಾಸವು ಇನ್ನೂ ಐದಾರು ನೂರು ವ್ಯಾಟುಗಳಷ್ಟು ಹೆಚ್ಚಿನ ಸಾಮರ್ಥ್ಯ ಪಡೆದುಕೊಂಡು ಬೆಳಗತೊಡಗಿತು!
________________________________________________________________________________________________________________________
ದಿನಾಂಕ 1/6/2013 ರಂದು ಕುಂದಾಪುರ ನಗರದ ಸುತ್ತಮುತ್ತಲಿನ ಕಾರ್ಮಿಕರ ತಾತ್ಕಾಲಿಕ ಟೆಂಟ್ ಗಳಿಗೆ ಭೇಟಿ ನೀಡಿ ಪಾಲಕರ ಮನವೊಲಿಸಿ ಅರ್ಹ ವಯಸ್ಸಿನ ಇಬ್ಬರು ವಿದ್ಯಾರ್ಥಿಗಳನ್ನು ಸ.ಹಿ.ಪ್ರಾ ಶಾಲೆ ಚಿಕ್ಕನಸಾಲ್ ಇಲ್ಲಿಗೆ ದಾಖಲಿಸಲಾಯಿತು.

ದಾಖಲಾದ ವಿದ್ಯಾರ್ಥಿಗಳ
ವಿವರ
ಮಗುವಿನ ಹೆಸರು ತಂದೆಯ
ಹೆಸರು ವಯಸ್ಸು ದಾಖಲಾದ ತರಗತಿ
ಶಿವಾನಂದ ರಂಗಪ್ಪ 7 1ನೇ ತರಗತಿ
ರೇಷ್ಮಾ
ಹೆಬ್ಬಾಳಪ್ಪ 6 1ನೇ ತರಗತಿ
ದಾಖಲಾದ ಮಕ್ಕಳಿಗೆ ಪಠ್ಯ ಪುಸ್ತಕಗಳು ಮತ್ತು ಬರೆವಣಿಗೆ
ಸಾಮಗ್ರಿಗಳನ್ನು ವಿತರಿಸಲಾಯ್ತು.ಟೆಂಟ್ ನಿಂದ ಶಾಲೆಗೆ ಬರಲು ರಾಷ್ಟ್ರೀಯ ಹೆದ್ದಾರಿಯನ್ನು ದಾಟಬೇಕಾಗಿರುವುದರಿಂದ ಮತ್ತು ಶಾಲೆಯಿಂದ ಮಕ್ಕಳ ತಾತ್ಕಾಲಿಕ ಟೆಂಟ್ ಗೆ ಒಂದು ಕಿಲೋಮೀಟರಗೂ
ಹೆಚ್ಚು ದೂರವಿರುವುದರಿಂದ ಶಾಲೆಯ ಮುಖ್ಯೋಪಾಧ್ಯಾಯಿನಿ ತಾತ್ಕಾಲಿಕವಾಗಿ ಸಾರಿಗೆ ಸೌಲಭ್ಯ ಒದಗಿಸುವುದಾಗಿ
ಪಾಲಕರಿಗೆ ತಿಳಿಸಿದರು.ವಿದ್ಯಾರ್ಥಿಗಳ ಮಾಸಿಕ ಹಾಜರಾತಿ ವಿವರಗಳನ್ನು ಈ ಕಛೇರಿಗೆ ನೀಡುವಂತೆ ಸೂಚಿಸಲಾಯ್ತು.
ತಂಡದಲ್ಲಿ...
ಶ್ರೀಮತಿ ಶೋಭಾ ಶೆಟ್ಟಿ
ಸಮನ್ವಯಾಧಿಕಾರಿ,ಕ್ಷೇತ್ರ ಸಂಪನ್ಮೂಲ ಕೇಂದ್ರ,ಕುಂದಾಪುರ
ಶ್ರಿ ಉದಯ ಗಾಂವಕಾರ ಕ್ಷೇತ್ರ ಸಂಪನ್ಮೂಲ ವ್ಯಕ್ತಿ, ಸಂಪನ್ಮೂಲ ಕೇಂದ್ರ,ಕುಂದಾಪುರ
ಶ್ರೀ ದಿನೇಶ ಪ್ರಭು. ಸಂಪನ್ಮೂಲ ವ್ಯಕ್ತಿ, ಸಂಪನ್ಮೂಲ ಕೇಂದ್ರ,ಕುಂದಾಪುರ
ಶ್ರೀ ಗಣೇಶ. ಜೀಪು ಚಾಲಕ
Really Good Work, keep it up
ಪ್ರತ್ಯುತ್ತರಅಳಿಸಿThank You.
ಪ್ರತ್ಯುತ್ತರಅಳಿಸಿexcellent sir
ಪ್ರತ್ಯುತ್ತರಅಳಿಸಿregards,
Guru
IT for Change
great job sir....:)
ಪ್ರತ್ಯುತ್ತರಅಳಿಸಿDone very good job.
ಪ್ರತ್ಯುತ್ತರಅಳಿಸಿತುಂಬಾ ಚೆನ್ನಾಗಿ ಪ್ರಯತ್ನಪಟ್ಟೀದ್ದೀರಿ. ನಿಮ್ಮ ತಂಡಕ್ಕೆ ಅಭಿನಂದನೆಗಳು. ಉದಯ್, ದಿನೇಶ್ ಗೆ ಅಭಿನಂದನೆಗಳು ರಾಮ ಮೊಗೇರ .
ಪ್ರತ್ಯುತ್ತರಅಳಿಸಿಧನ್ಯವಾದಗಳು!
ಪ್ರತ್ಯುತ್ತರಅಳಿಸಿ-ಉದಯ ಗಾಂವಕಾರ
Very inspiring.. it's a great work indeed..
ಪ್ರತ್ಯುತ್ತರಅಳಿಸಿhats off to all the teachers :)
Bhavya Kundapura
Thank u Bhavya.
ಪ್ರತ್ಯುತ್ತರಅಳಿಸಿ-Uday Gaonkar