ಕುಂದಾಪುರ, ಜೂ. 14: ನ್ಯೂನತೆಯನ್ನು ಪ್ರಾರಂಭದಲ್ಲೇ ಗುರುತಿಸಿ, ಪ್ರಾಥಮಿಕ ಹಂತದಲ್ಲೇ ಸೂಕ್ತ ಚಿಕಿತ್ಸೆ ನೀಡಿದರೆ ಗುಣಮುಖ ಹೊಂದಬಹುದು. ಅಲಸ್ಯ ಮಾಡದೇ ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ಆಲೋಚಿಸಬೇಕು. ಇವತ್ತು ಸರಕಾರದಿಂದ ಇಂಥಹ ವಿಚಾರಗಳಲ್ಲಿ ಸಾಕಷ್ಟು ಸವಲತ್ತುಗಳು ಸಿಗುತ್ತವೆ ಅದನ್ನು ಉಪಯೋಗಿಸಿಕೊಳ್ಳಬೇಕು ಎಂದು ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಗಣಪತಿ ಶ್ರೀಯಾನ್ ಹೇಳಿದರು. ಕುಂದಾಪುರದ ವಡೇರಹೋಬಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಾಪುರ, ಸರ್ವಶಿûಾ ಅಭಿಯಾನದ ವತಿಯಿಂದ ಶೆ„ಕ್ಷಣಿಕ ವಲಯದ ವಿಶೇಷ ಅಗತ್ಯವುಳ್ಳ ಮಕ್ಕಳ ಬಲವರ್ಧನೆ, ಅವಶ್ಯಕ ಸಾಧನ ಸಲಕರಣೆಗಳ ನಿರ್ಧಾರಣೆಗಾಗಿ ಆಯೋಜಿಸಲಾದ ವೈದ್ಯಕೀಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ಕುಂದಾಪುರ ತಾ.ಪಂ. ಅಧ್ಯಕ್ಷೆ ದೀಪಿಕಾ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸರ್ವಶಿûಾ ಅಭಿಯಾನದ ಅಧಿಕಾರಿ ನಾಗರಾಜ ಅವರು ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿ, ಜಿಲ್ಲೆಯಲ್ಲಿ 2223 ನ್ಯೂನತೆ ಇರುವ ಮಕ್ಕಳನ್ನು ಗುರುತಿಸಲಾಗಿದೆ. ಅವರಿಗೂ ಸಮನ್ವಯದ ಶಿಕ್ಷಣ ನೀಡುವುದು ಇಲಾಖೆಯ ಉದ್ದೇಶ. 25 ವೈದ್ಯರಳನ್ನೊಗೊಂಡ ತಂಡ ಜಿಲ್ಲೆ ಐದು ವಲಯಗಳಲ್ಲಿ ಇಂಥಹ ಶಿಬಿರಗಳನ್ನು ಆಯೋಜಿಸಿ ನ್ಯೂನತೆ ಇರುವ ಮಕ್ಕಳನ್ನು ವೈದ್ಯಕೀಯವಾಗಿ ತಪಾಸಣೆಗೊಳಿಸುವ ಕೆಲಸ ಮಾಡುತ್ತಿದೆ ಎಂದರು. ವೈದ್ಯಕೀಯ ತಂಡದ ಡಾ| ಬನ್ಸಾಲ್, ಶಾಲೆಯ ಮುಖ್ಯೋಪಾಧ್ಯಾಯ ಸುಧಾಕರ ಶೆಟ್ಟಿ, ಶಿವಾನಂದ ಮಯ್ಯ ಉಪಸ್ಥಿತರಿದ್ದರು.ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ ಸ್ವಾಗತಿಸಿದರು. ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಶೋಭಾ ಶೆಟ್ಟಿ ವಂದಿಸಿದರು. ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಉದಯ ಗಾಂವ್ಕರ್ ಕಾರ್ಯಕ್ರಮ ನಿರ್ವಹಿಸಿದರು
http://kannada.yahoo.com/%E0%B2%B5-%E0%B2%B6-%E0%B2%B7-%E0%B2%85%E0%B2%97%E0%B2%A4-%E0%B2%AF%E0%B2%B5-%E0%B2%B3-%E0%B2%B3-%E0%B2%AE%E0%B2%95-084738885.html
http://kannada.yahoo.com/%E0%B2%B5-%E0%B2%B6-%E0%B2%B7-%E0%B2%85%E0%B2%97%E0%B2%A4-%E0%B2%AF%E0%B2%B5-%E0%B2%B3-%E0%B2%B3-%E0%B2%AE%E0%B2%95-084738885.html
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ