ಜನವರಿ 28, 2013

ಕೇರಳ ಕರೆಯುತಿದೆ!








ಶೈಕ್ಷಣಿಕ ಅಧ್ಯಯನ ಪ್ರವಾಸ-ವರದಿ ದಿನಾಂಕ:12.02.2012
      ಕೇರಳ ರಾಜ್ಯದ ತ್ರಿವೆಂಡ್ರಮ್ ಜಿಲ್ಲೆಗೆ ಶೈಕ್ಷಣಿಕ ಅಧ್ಯಯನ ಪ್ರವಾಸ ಕೈಗೊಳ್ಳುವ ಉದ್ದೇಶದಿಂದ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ ಉಡುಪಿ, ಇದರ ಪ್ರಾಂಶುಪಾಲರು ಜಿಲ್ಲೆಯ 5 ವಲಯಗಳ ಹತ್ತು ಸದಸ್ಯರುಳ್ಳ ತಂಡವನ್ನು ರಚಿಸಿದರು. ಪ್ರವಾಸದ ಉಸ್ತುವಾರಿಯನ್ನು ಡಯಟ್‍ನ ಹಿರಿಯ ಉಪನ್ಯಾಸಕರಾದ ಶ್ರೀಮತಿ ಜಾಹ್ನವಿಯವರಿಗೆ ವಹಿಸಲಾಯಿತು.ತಂಡದಲ್ಲಿ ಈ ಕೆಳಗಿನ ಸದಸ್ಯರು ಒಳಗೊಂಡಿದ್ದರು.
1.ಶ್ರೀ ಗೋಪಾಲ ಶೆಟ್ಟಿ, ಬಿ.ಇ.ಓ ಕುಂದಾಪುರ
2.ಶ್ರೀಮತಿ ಜಾಹ್ನವಿ, ಹಿರಿಯ ಉಪನ್ಯಾಸಕರು,ಡಯಟ್
3.ಶ್ರೀಮತಿ ಸುಜಾತಾ,  ಉಪನ್ಯಾಸಕರು,ಡಯಟ್
4.ಶ್ರೀ ಉದಯ್‍ಗಾಂವಕಾರ, ಸಮನ್ವಯಾಧಿಕಾರಿ(ಪ್ರಭಾರ)ಕುಂದಾಪುರ
5.ಶ್ರೀಮತಿ ರವಿಕಲಾ, ಸಂಪನ್ಮೂಲ ವ್ಯಕ್ತಿ, ಉಡುಪಿ
6.ಶ್ರೀ ಶ್ರೀಧರ್, ಮುಖ್ಯ ಶಿಕ್ಷಕರು
7.ಶ್ರೀ ಧನಲಕ್ಷ್ಮೀ, ಸಂಪನ್ಮೂಲ ವ್ಯಕ್ತಿ ಬಿ.ಆರ್.ಸಿ ಬ್ರಹ್ಮಾವರ
8.ಶ್ರೀ ಗಣಪತಿ ಹೋಬಳಿದಾರ, ಸಿ.ಆರ್.ಪಿ,ಬೈಂದೂರು
9.ಶ್ರೀ ಶಾಂತಾರಾಮ ಶೆಟ್ಟಿ, ಐ.ಇ.ಆರ್.ಟಿ ಕಾರ್ಕಳ
10.ಶ್ರೀ ಮಂಜುನಾಥ.ಕೆ.ಎಸ್,  ಸಿ.ಆರ್.ಪಿ ಬ್ರಹ್ಮಾವರ.
       ಪ್ರವಾಸ ತಂಡದ ಸದಸ್ಯರು ದಿನಾಂಕ- 12.02.2012 ರಂದು ಸಭೆ ಸೇರಿ ಭೇಟಿ ಮಾಡಬೇಕಾದ ಸಂಸ್ಥೆUಳು, ಭೇಟಿಯ ಉದ್ದೇಶ,ಗಮನಿಸಬೇಕಾದ ಅಂಶಗಳ ಕುರಿತು ಚರ್ಚೆ ನಡೆಸಿದರು.ಸಂದರ್ಶಿಸಲಿರುವ ವ್ಯಕ್ತಿಗಳೊಡನೆ ಮಾಹಿತಿ ಸಂಗ್ರಹಣೆಗೆ ಅನುಕೂಲವಾಗುವಂತಹ ಪ್ರಶ್ನಾವಳಿಗಳನ್ನು ತಯಾರಿಸಲಾಯಿತು.
ದಿನಾಂಕ:13.02.2012
         ಉಡುಪಿಯಿಂದ ಮಂಗಳೂರಿಗೆ ಬಸ್ ಪ್ರಯಾಣ, ಸಂಜೆ 5.30ಕ್ಕೆ ಮಂಗಳೂರಿನಿಂದ ಮಲಬಾರ್ ಎಕ್ಸ್‍ಪ್ರೆಸ್ ರೈಲಿನ ಮೂಲಕ ತ್ರಿವೆಂಡ್ರಮ್‍ಗೆ ಹೊರೆಟವು. ಹದಿನೈದು ಗಂಟೆಗಳ ಪ್ರಯಾಣ. ತ್ರಿವೆಂಡ್ರಮ್ ತಲುಪುವಾಗ ಸಮಯವೂ 9.30 ಸಮೀಪದ ಮಣಕಾಡ್ ಹೊಟೆಲಿನಲ್ಲಿ ವಾಸ್ತವ್ಯದ ಏರ್ಪಾಟು ಮಾಡಿಕೊಂಡೆವು. ಬೇಗನೆ ಸಿದ್ಧಗೊಂಡು ತ್ರಿವೆಂಡ್ರಮ್‍ನಿಂದ ಮುಕ್ಕಾಲು ಗಂಟೆ ಪ್ರಯಾಣದಷ್ಟು ದೂರವಿರುವ ಅಟ್ಟಿಂಗಲ್‍ಗೆ ಹೊರಡಲು ಅಣಿಯಾದೆವು. ತ್ರಿವೆಂಡ್ರಮ್ ಜಿಲ್ಲೆಯ ಡಯಟ್ ಇರುವುದು ಅಟ್ಟಿಂಗಲ್‍ನಲ್ಲಿ. ಅಟ್ಟಿಂಗಲ್ ತಲುಪುವಾಗ ಮಧ್ಯಾಹ್ನ 12.00 ಗಂಟೆ.ಪ್ರಾಂಶುಪಾಲರು ನಗುಮೊಗದಿಂದ ಸ್ವಾಗತಿಸಿ ಡಯಟ್‍ನ ಕೆಲಸದ ಸ್ವರೂಪದ ಕುರಿತು ನಮ್ಮೊಡನೆ ಮಾತನಾಡಿದರು.
        ಪ್ರಾಂಶುಪಾಲರಾದ ಕೇಶವನ್‍ರೊಡನೆ ನಮ್ಮ ಸಂದರ್ಶನದ ಜವಾಬ್ದಾರಿಯನ್ನು ಪ್ರವಾಸದ ಉಸ್ತುವಾರಿ ಅಧಿಕಾರಿಯಾದ ಶ್ರೀಮತಿ ಜಾಹ್ನವಿ ವಹಿಸಿದರು.ಡಯಟ್‍ನಲ್ಲಿ ಒಬ್ಬರು ಪ್ರಾಂಶುಪಾಲರನ್ನು ಹೊರತು ಪಡಿಸಿ ಏಳು ಜನ ಹಿರಿಯ ಉಪನ್ಯಾಸಕರು ಮತ್ತು ಆರು ಜನ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿರುವುದನ್ನು ನಾವು ಕಂಡುಕೊಂಡೆವು. ಡಯಟನ ಪ್ರತಿ ವಿಭಾಗಕ್ಕೂ ಒಬ್ಬ ಹಿರಿಯ ಉಪನ್ಯಾಸಕರು ಜವಬ್ದಾರಿ ಹೊಂದಿರುವುದು ತಿಳಿಯಿತು. ಡಯಟನ ರಚನೆ ಹಾಗೂ ಕಾರ್ಯನಿರ್ವಹಿಸುವ ವಿಧಾನಗಳು ನಮ್ಮ ಡಯಟನ ಹಾಗೆಯೇ ಇರುವುದನ್ನು  ಮನಗಂಡೆವು.
         ಶಿಕ್ಷಕರ ಸೇವಾನಿರತ ತರಬೇತಿಗೆ ಸಂಬಂಧಿಸಿದಂತೆ ಕೆಲವು ಮಹತ್ವದ ಬದಲಾವಣೆಗಳನ್ನು ನಾವಲ್ಲಿ ಕಂಡೆವು. ಡಯಟನ ವ್ಯಾಪ್ತಿಗೆ ಬರುವ ಪ್ರತಿ ಕ್ಷೇತ್ರ ಸಂಪನ್ಮೂಲ ಕೇಂದ್ರಕ್ಕೂ ಒಬ್ಬ ಹಿರಿಯ ಉಪನ್ಯಾಸಕರು ಉಸ್ತುವಾರಿ ನಿರ್ವಹಿಸುತ್ತಾರೆ. ಅವರು ಪ್ರತಿ ಶನಿವಾರ ಡಯಟಗೆ ತೆರಳಿ ತರಬೇತಿ ಮತ್ತಿತರ ಕಾರ್ಯಕ್ರಮಗಳ ಪರಿಶೀಲನೆ ನಡೆಸುತ್ತಾರೆ.ಮುಂಬರುವ ಕಾರ್ಯಕ್ರಮಗಳ ಯೋಜನೆ ಸಿದ್ಧಪಡಿಸುತ್ತಾರೆ.
         ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹಿಂದೆ ಬಿದ್ದಿರುವ ಶಾಲೆಗಳ ಕುರಿತು ವಿಶೇಷ ಗಮನ ನೀಡಲಾಗುತ್ತದೆ. ಕಿಇPಖ  ಮೂಲಕ ಅಂತಹ ಶಾಲೆಗಳನ್ನು ಗುರುತಿಸಲಾಗುತ್ತದೆ.
           ಡಯಟನ ಆವರಣದಲ್ಲಿರುವ ಕಾರ್ಪೋರೇಷನ್ ಶಾಲೆಗೆ ಅನಂತರ ಭೇಟಿ ನೀಡಲಾಯಿತು.ವಿದ್ಯಾರ್ಥಿಗಳ ಪ್ರಯಾಣಕ್ಕೆ ಸಾರಿಗೆ ವಾಹನ ವ್ಯವಸ್ಥೆಗೊಳಿಸಿರುವುದು ನಮ್ಮ ಗಮನಕ್ಕೆ ಬಂದಿತು.ಚಟುವಟಿಕೆಯಾಧರಿಸಿದ ಕಲಿಕೆಯ ಕ್ರಮವನ್ನು ಶಿಕ್ಷಕರು ಅನುಸರಿಸುತ್ತಿದ್ದರು. ಶಾಲಾಸ್ವಚ್ಛತೆಯ ವಿಷಯದಲ್ಲಿ ಶಾಲೆ ಸಾಕಷ್ಟು ಸುಧಾರಣೆಗಳನ್ನು ಮಾಡಿಕೊಳ್ಳಬೇಕಾಗಿದೆ ಎನಿಸಿತು.
ದಿನಾಂಕ:14.02.2012
          ಇಂದು ಮುಂಜಾನೆಯೇ ಸರ್ವಶಿಕ್ಷಣ ಅಭಿಯಾನದ ಜಿಲ್ಲಾ ಯೋUಜನಾಧಿಕಾರಿಗಳನ್ನು ಭೇಟಿಯಾಗಲು ನಿರ್ಧರಿಸಿ ಹೊರಟೆವು.ಮುಂದಿನ ವರ್ಷದ ವಾರ್ಷಿಕ ಕಾರ್ಯಯೋಜನೆ ಸಿದ್ಧಪಡಿಸಿರುವ ಕೇಂದ್ರದಲ್ಲಿ ಅವರು ನಿರತರಾಗಿದ್ದರು. ಸರ್ವಶಿಕ್ಷಣ ಅಭಿಯಾನದ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುವಲ್ಲಿ ಹೊರಗುತ್ತಿಗೆ ನೌಕರರು ಹೇಗೆ ನೆರವಾಗುತ್ತಾರೆ.ಎಂಬುದನ್ನು ನಾವು ತಿಳಿದುಕೊಳ್ಳಬೇಕಿತ್ತು.ಕಛೇರಿ ನಿರ್ವಹಣೆಯನ್ನು ಹೊರಗುತ್ತಿಗೆ ನೌಕರರೇ ನಿರ್ವಹಿಸುತ್ತಿದ್ದರು.ಕಾಮಗಾರಿಗಳ ಪರಿಶೀಲನೆ ನಡೆಸುವ ಎಂಜಿನಿಯರ್‍ಗಳೂ ಹೊರಗುತ್ತಿಗೆಯ ಮೂಲಕವೇ ಕಾರ್ಯನಿರ್ವಹಿಸುತ್ತಿದ್ದರು.
        ಸಿವಿಲ್ ಕಾಮಗಾರಿಗಳಿಗೆ ಕರ್ನಾಟಕದಲ್ಲಿ ನೀಡಲಾಗುವ ಅನುದಾನಕ್ಕಿಂತ ಕಡಿಮೆ ಮೊತ್ತವನ್ನು ನಿಗದಿ ಪಡಿಸಿರುವುದು ನಮ್ಮ ಗಮನ ಸೆಳೆಯಿತು. ಮುಖ್ಯೋಪಾಧ್ಯಾಯರ ಕೊಠಡಿ ನಿರ್ಮಾಣಕ್ಕೆ ನಮ್ಮ ರಾಜ್ಯದಲ್ಲಿ 4.65 ಲಕ್ಷರೂಪಾಯಿ ನೀಡಲಾಗುತ್ತಿದ್ದರೆ, ಕೇರಳರಾಜ್ಯದಲ್ಲಿ 3.65 ಲಕ್ಷ ನೀಡಲಾಗುತ್ತಿದೆ ಎಂಬುದನ್ನು ಜಿಲ್ಲಾ ಯೋಜನಾ ಅಧಿಕಾರಿಗಳು ತಿಳಿಸದರು.
          ಜಿಲ್ಲೆಯಲ್ಲಿ ಶಿಕ್ಷಕರ ಬ್ಯಾಂಕ್ ಎಂಬ ಪರಿಕಲ್ಪನೆ ಇರುವುದನ್ನು ತಿಳಿಸಲಾಯಿತು.ಪ್ರತಿ ಬ್ಲಾಕ್‍ನಲ್ಲಿಯೂ ನಿರ್ದಿಷ್ಟ ಸಂಖ್ಯೆಯ ಹೆಚ್ಚುವರಿ ಶಿಕ್ಷಕರ ಒಂದು ಬ್ಯಾಂಕ್ ಇದ್ದು, ಇಲ್ಲಿನ ಶಿಕ್ಷಕರು ಶಾಲೆಗಳಲ್ಲಿ ಶಿಕ್ಷಕರ ಕೊರೆತೆ ಸಂಭವಿಸಿದಾಗ ಅಲ್ಲಿಗೆ ತೆರಳಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಇದರಿಂದ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಸಂಭವಿಸುವುದಿಲ್ಲ.
      ಮಧ್ಯಾಹ್ನ ಸಮೀಪದ ಶಾಲೆಗೆ ತೆರಳಿ ಮಧ್ಯಾಹ್ನದ ಬಿಸಿಊಟ ಯೋಜನೆಯನ್ನು ವೀಕ್ಷಿಸಬೇಕಾಗಿರುವುದರಿಂದ ನಾವು ಅಲ್ಲಿಂದ ಹೊರಟೆವು.
         ಶಾಲೆಯಲ್ಲಿ ಗೋಡೆಗಳಿಗೆ ಪೇಂಟ್ ಮಾಡಿದ ವಿನ್ಯಾಸವು ನಮ್ಮ ಗಮನ ಸೆಳೆಯುವಂತಿತ್ತು.ಬಹುವರ್ಣಗಳ ವಿಶಿಷ್ಠ ವಿನ್ಯಾಸವನ್ನು ನಾವು ಬೇರೆ ಶಾಲೆಗಳಲ್ಲಿಯೂ ಗಮನಿಸ್ಸಿದ್ದೆವು. ಶಾಲೆಯ ಮುಖ್ಯೋಪಾಧ್ಯಾಯರನ್ನು ಭೇಟಿ ಮಾಡಿ ತರಗತಿ ಪ್ರಕ್ರಿಯೆಗಳನ್ನು ವೀಕ್ಷಿಸಲು ಅವಕಾಶ ಪಡೆದುಕೊಂಡೆವು. ತರಗತಿಗಳಲ್ಲಿ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ನಿರತರಾಗಿರುವುದು ನಮ್ಮ ಗಮನ ಸೆಳೆಯಿತು. ರಾಷ್ಟ್ರೀಯ ಪಠ್ಯಕ್ರಮ ನೆಲಗಟ್ಟು -2005ರ ವೇಗದಲ್ಲಿ ರಚಿಸಲಾದ ಪಠ್ಯಕ್ರಮಗಳು ಮತ್ತು ಬೋಧನಾ ಕ್ರಮಗಳನ್ನು ಅನುಸರಿಸಲಾಗುತ್ತದೆ ಎಂದು ಶಿಕ್ಷಕರು ತಿಳಿಸಿದರು.
          ಮಧ್ಯಾಹ್ನದ ಬಿಸಿಯೂಟದಲ್ಲಿ ಸಾರು,ಸಾಂಬಾರು ಮತ್ತು ಪಲ್ಯ ನೀಡಾಗುತ್ತಿದೆ. ಶಾಲೆಯಿಂದ ಹೋಗುವಾಗ 200mಟ ನಷ್ಟು ಬಿಸಿ ಹಾಲನ್ನು ಕೊಡಲಾಗುತ್ತದೆ. ಬಿಸಿಯೂಟದ ಉಸ್ತುವಾರಿಯನ್ನು ತಾಯಂದಿರ ಪರಿಷತ್ತು ನಿರ್ವಹಿಸುತ್ತಿತ್ತು. ಈ ಶಾಲೆಯಲ್ಲೂ ಸಹ ದೂರದ ಸ್ಥಳಗಳಿಂದ ಬರುವ ಮಕ್ಕಳಿಗಾಗಿ ಸಾರಿಗೆ ವಾಹನವನ್ನು ವ್ಯವಸ್ಥೆಗೊಳಿಸಲಾಗಿತ್ತು. ಅಡುಗೆ ಬೇಯಿಸಲು ಸೌದೆಯನ್ನೇ ಬಳಸುತ್ತಿರುವುದರ ಬಗ್ಗೆ ತಂಡದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
         ಶಾಲಾಭೇಟಿಯಲ್ಲಿ  ನಮ್ಮ ತಂಡವು ಪಾಲಕ ಶಿಕ್ಷಕ ಸಂಘ ಮತ್ತು ತಾಯಂದಿರ ಸಂಘದ ಸಕ್ರೀಯ ಭಾಗವಹಿಸುವಿಕೆಯನ್ನು ಕಂಡುಕಂಡೆವು. ಪಾಲಕರ ಸಂಘಕ್ಕೆ ಕೆಲವು ಶಾಲೆಗಳಲ್ಲಿ ಪ್ರತ್ಯೇಕ ಕೋಣೆಯನ್ನು ಮೀಸಲಿಡಲಾಗಿತ್ತು. ಅಲ್ಲಿ ಪಾಲಕ ಪ್ರತಿನಿಧಿಗಳು ಉಪಸ್ಥಿತರಿದ್ದು, ಶಾಲಾಭಿವೃದ್ಧಿಯ ಕುರಿತು ಯೋಜನೆಗಳನ್ನು ರೂಪಿಸುವುದು, ಮೇಲುಸ್ತುವಾರಿ ನೋಡಿಕೊಳ್ಳುವುದು ಮುಂತಾದ ಶಾಲಾಪರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ