ಗಮನ ಸೆಳೆವ ಶಾಲಾ ಪತ್ರಿಕೆಗಳು
ಮಕ್ಕಳು ಮಹಾ ವಟವೃಕ್ಷವೊಂದರ ಬೀಜದ ಹಾಗೆ-ಈ ನೆಲದ ಸತ್ವವನ್ನು ಹೀರಿಕೊಂಡು ನೂರಾರು ಜನರಿಗೆ ನೆರಳಾಗಬಲ್ಲ ಬೃಹದಾಕಾರದ ಮರ ಆ ಬೀಜದೊಳಗೇ ಅಡಗಿರುತ್ತದೆ. ಸಿಗುವ ಅವಕಾಶಗಳು ಆ ಸಾಧ್ಯತೆಗಳನ್ನು ನಿರ್ಧರಿಸುತ್ತವೆ ಅಷ್ಟೇ.
ಕುಂದಾಪುರ ವಲಯದ ಅನೇಕ ಶಾಲೆಗಳಲ್ಲಿ ಹೊರತರಲಾಗುತ್ತಿರುವ ಕೈಬರೆಹದ ಪತ್ರಿಕೆಗಳು ಮಕ್ಕಳಿಗೆ ``ಹೆಮ್ಮರ''ವಾಗುವ ಅವಕಾಶಗಳನ್ನು ನೀಡುತ್ತಿವೆ.

ಕೆಲ ವರ್ಷಗಳ ಹಿಂದೆ,``ಹೆಮ್ಮರ`' ವೆಂಬ ಮಕ್ಕಳ ಬರೆಹದ ಪತ್ರಿಕೆಯನ್ನು ಕುಂದಾಪುರ ಮೂಲದ ಶಿಕ್ಷಕ,ಕಥೆಗಾರ,ನಾಟಕಕಾರ ಸಂತೋಷ ಗುಡ್ಡೆಯಂಗಡಿ ನಂಜನಗೂಡಿನ ಹೆಮ್ಮರಗಾಲ ಶಾಲೆಯಲ್ಲಿ ಹೊರತಂದಾಗ ಅದರ ಪ್ರಭಾವ ಕುಂದಾಪುರದ ಶಿಕ್ಷಕರ ಮೇಲೆ ಇಷ್ಟರ ಮಟ್ಟಿಗೆ ಆಗಬಹುದೆಂದು ನಾನು ಊಹಿಸಿರಲಿಲ್ಲ.ಮೊದಲು ಹೆಸ್ಕತ್ತೂರು ಶಾಲೆ,ಆನಂತರ ಯಡಾಡಿ-ಮತ್ಯಾಡಿ ಹಾಗೆ..ಶಾನ್ಕಟ್ಟು,ಭೇಳೂರು,ತೆಕ್ಕಟ್ಟೆ,ಕೊರ್ಗಿ..ಒಂದೇ,ಎರಡೇ..? ಈಗ ಗಮನಾರ್ಹ ಸಂಖ್ಯೆಯ ಶಾಲೆಗಳಲ್ಲಿ ಈ ಚಟುವಟಿಕೆ ನಡೆಯುತ್ತಿದೆ.
ಮಚ್ಚಟ್ಟು ಶಾಲೆಯ``ಪ್ರತಿಬಿಂಬ`'ಮಕ್ಕಳೇ ಬರೆವ ಕೈ ಬರೆಹದ ಪತ್ರಿಕೆಗಳ ಸಾಲಿಗೆ ಹೊಸ ಸೇರ್ಪಡೆ.ಪುಟಾಣಿ ಮಕ್ಕಳು ತಮ್ಮ ಕಲ್ಪನೆಗಳನ್ನು ಕೈ ಬೆರಳ ತುದಿಗೆ ತಲುಪಿಸುವ ಕ್ರೀಯೆ ಬಹಳ ನಾಜೂಕಿನದು,ಅಷ್ಟೇ ಚೇತೋಹಾರಿಯಾದುದು. ತಮ್ಮದೇ ಆಲೋಚನೆಗಳನ್ನು ಮೀರಿ ಹೊಸ ಆಲೋಚನೆಗಳಿಗೆ ಜಿಗಿಯುವ ಸೀಮೋಲಂಘನ ಕ್ರೀಯೆ ಹೀಗೇ ನಿರಂತರವಾಗಲಿ..ಉತ್ತರೋತ್ತರವಾಗಲಿ.
ಉದಯ ಗಾಂವಕಾರ

ತುಂಬ ಒಳ್ಳೆಯ ಕೆಲಸ. ಮುಂದುವರಿಸಿ. ಕೈಬರೆಹದ ಪತ್ರಿಕೆಗಳನ್ನು ನಾವೂ ನಮ್ಮ ಶಾಲೆಯಲ್ಲಿ ಮಾಡುತ್ತಿದ್ದೆವು.
ಪ್ರತ್ಯುತ್ತರಅಳಿಸಿ