ಅಕ್ಟೋಬರ್ 17, 2013

What an Idea Sharadhi!




ಮೊನ್ನೆ ಅಕ್ಟೋಬರ್ 10 ರಂದು ಇಡೀ ಕರ್ನಾಟಕವೇ ಹೆಮ್ಮೆ ಪಡಬೇಕಾದ ಸಂಗತಿ ದೆಹಲಿಯ ಪ್ರಗತಿ ಮೈದಾನ,ಇಲ್ಲಿ ಆಯೋಜಿಸಲಾದ ರಾಷ್ಟ್ರ ಮಟ್ಟದ ಪ್ರಾಜೆಕ್ಟ್‍ಗಳ ವಸ್ತುಪ್ರದರ್ಶನ ಮತ್ತು ಸ್ಪರ್ಧೆ ಕಾರ್ಯಕ್ರಮದಲ್ಲಿ ನಡೆದು ಹೋಯಿತು. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 8ನೇ ತರಗತಿಯ ಕು. ಶರಧಿ ಶೆಟ್ಟಿ ತನ್ನ ಯೋಜನೆಗಾಗಿ Inspire Award ಮತ್ತು ಸ್ವರ್ಣ ಪದಕವನ್ನು ಭಾರತದ ಉಪರಾಷ್ಟ್ರಪತಿ ಶ್ರೀ ಎಮ್. ಹಮೀದ್ ಅನ್ಸಾರಿ ಇವರಿಂದ ಪಡೆದಳು . ಇನ್‍ಸ್ಪಾಯರ್ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ದೆಹಲಿ ಈ ಸಂಸ್ಥೆಯು ಆಯೋಜಿಸಿತ್ತು. ಈ ಕಾರ್ಯಕ್ರಮವು ಮೂರು ಹಂತಗಳಲ್ಲಿ ನಡೆದುದಾಗಿರುತ್ತದೆ. ಉಡುಪಿ ಜಿಲ್ಲೆಯ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಉಡುಪಿ ಡಯಟ್ ಉಸ್ತುವಾರಿಯಲ್ಲಿ ಮಣಿಪಾಲದ ಮಣಿಪಾಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಈ ಸಂಸ್ಥೆಯ ಆಶ್ರಯದಲ್ಲಿ ದಿನಾಂಕ 2013 ರ ಜುಲೈ 13-16 ರ ಅವಧಿಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಸಲ್ಪಟ್ಟಿತು. ಸುಮಾರು 648 ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಷ್ಟು ವಿದ್ಯಾರ್ಥಿಗಳಲ್ಲಿ 55 ವಿದ್ಯಾರ್ಥಿಗಳ ಯೋಜನೆಗಳು ರಾಜ್ಯ ಮಟ್ಟದ ಪ್ರದರ್ಶನ ಮತ್ತು ಸ್ಪರ್ಧೆಗಾಗಿ ಆಯ್ಕೆಯಾಗಿದ್ದವು. ಉಡುಪಿ ಜಿಲ್ಲೆಯಿಂದ ರಾಜ್ಯ ಮಟ್ಟದಲ್ಲಿ ಭಾಗವಹಿಸಿದ 48 ವಿದ್ಯಾರ್ಥಿಗಳಲ್ಲಿ 12 ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಪ್ರದರ್ಶನ ಮತ್ತು ಸ್ಪರ್ಧೆ ಗಾಗಿ ಆಯ್ಕೆಯಾದರು. ದಕ್ಷಿಣ ಪ್ರಾಂತೀಯ ವಿಭಾಗದ ಕರ್ನಾಟಕದ 5 ವಿದ್ಯಾರ್ಥಿಗಳಿಗೆ ಪ್ರಾಂತೀಯ ಪ್ರಶಸ್ತಿಯು ದೊರೆಯಿತು. ಶರಧಿ ಶೆಟ್ಟಿ ರೇನ್ ಸೆನ್ಸರಿಂಗ್ ಎನ್ನುವ ಅದ್ಭುತವಾದ ಪ್ರಾಜೆಕ್ಟ್ ಮಾಡಿ, ದೇಶದ ವಿಜ್ಞಾನಿ ಜೂರಿಗಳ ಗಮನ ಸೆಳೆದಿದ್ದಳು. ಮಳೆಗಾಲದ ಮಳೆಯ ಕಣ್ಣಾ ಮುಚ್ಚಾಲೆ ಸಂದರ್ಭದಲ್ಲಿ ಒಗೆದ ಬಟ್ಟೆಗಳನ್ನು ಹೊರಗೆ ಒಣ ಹಾಕಿದಾಗ ಗೊತ್ತಿಲ್ಲದೇ ಮಳೆ ಬಂತೆಂದರೆ, ನೇತು ಹಾಕಿದ ಆ ಬಟ್ಟೆಗಳೆಲ್ಲಾ ಮನೆಯ ಒಳಗಡೆ ಬರುವುದು, ಮತ್ತು ಮಳೆ ಬಿಟ್ಟಾಗ ಹೊರಗಡೆ ಹೋಗುವಂತಹ ಮಹದುಪಕಾರಿಯಾದ ಪ್ರಾಜೆಕ್ಟ್ ಇದಾಗಿತ್ತು. ರಾಷ್ಟ್ರ ಮಟ್ಟದ ಗಮನ ಸೆಳೆದ ಈ ಪ್ರಾಜೆಕ್ಟ್‍ರಾಷ್ಟ್ರದ ಪ್ರಥಮ ಪ್ರಶಸ್ತಿ ಪಡೆಯುವಲ್ಲಿ ಭಾಜನವಾಗಿರುವುದು ಕರ್ನಾಟಕ, ಅದರಲ್ಲೂ ಉಡುಪಿ ಜಿಲ್ಲೆಗೆ ಅತ್ಯಂತ ಹರ್ಷದಾಯಕ ಸಂಗತಿಯಾಗಿರುತ್ತದೆ. ಈ ಸ್ವರ್ಣ ಪದಕದ ಜೊತೆಯಲ್ಲಿ ಕು. ಶರಧಿ ಶೆಟ್ಟಿಯು ಒಂದು ಲ್ಯಾಪ್ ಟಾಪ್ ಮತ್ತು ರೂ. 20,000/- ದ ನಗದು ಪುರಸ್ಕಾರವನ್ನೂ ಪಡೆದಿರುತ್ತಾಳೆ. ಶರಧಿ ಶೆಟ್ಟಿಯ ತಂದೆ ಶಿರಿಯಾರ ಮೇಲ್ಮನೆ ಶ್ರೀ ಭಾಸ್ಕರ ಶೆಟ್ಟಿಯವರದು ಕೃಷಿ ಕೆಲಸ.
ಕರ್ನಾಟಕದ ತಂಡವು ಜ್ಯೂರಿಗಳ ಹ್ರದಯವನ್ನು ಗೆದ್ದು 5 ಪ್ರಾಂತ್ಯ ಮಟ್ಟದ ಪ್ರಶಸ್ತಿಗಳನ್ನು ತನ್ನ ಬುಟ್ಟಿಗೆ ಸೇರಿಸಿಕೊಂಡು, ಅತ್ಯಂತ ಹೆಚ್ಚು ಪ್ರಶಸ್ತಿಗಳಿಗೆ ಭಾಜನವಾದ ರಾಜ್ಯವೆನಿಸಿದೆ. ಈ ಐದು ಪ್ರಶಸ್ತಿಗಳನ್ನು ಪಡೆದವರೆಂದರೆ,
1. ಮಹಾದೇವ ಸ್ವಾಮಿ, ಸ.ಹಿ.ಪ್ರಾಥಮಿಕ ಶಾಲೆ, ಮಾಲ್ಕುಂಡಿ, ನಂಜನಗೂಡು ತಾಲೂಕು. ( ಸ್ವಯಂ ಚಾಲಿತ ಹೆಡ್ ಲೈಟ್).
2. ನಾಗಶ್ರೀ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಸಿದ್ದಾಪುರ, ಉತ್ತರ ಕನ್ನಡ ಜಿಲ್ಲೆ.( ಸೋಲಾರ್ ಸೆಲ್ ನಿಂದ ಇಲೆಕ್ಟ್ರಿಸಿಟಿ, ಕಾನ್ವೆಕ್ಸ್ ಲೆನ್ಸ್ ಮತ್ತು ಸೊಲಾರ್ ಟ್ರಾಕ್ಸ್).
3. ದಕ್ಷತಾ ಎಸ್., ಶರತ್ ಮೆಮೋರಿಯಲ್ ಶಾಲೆ, ಐಜೂರು. ( ಪವರ್ ಸೇವರ್ ಲೈಟ್).
4. ಅನ್ವಿತಾ ಜಿ. ಮೈತ್ರಿ ಹಿ.ಪ್ರಾ.ಶಾಲೆ, ಶಿಕಾರಿಪುರ, ಶಿವಮೊಗ್ಗ ಜಿಲ್ಲೆ. ( ಲೇಸರ್ ಮೈಕ್ರೋ ಪ್ರಾಜೆಕ್ಟರ್ ಮತ್ತು ಲೇಸರ್ ರೇ ಒಸಿಲೋಸ್ಕೋಪ್ ).
5. ಗೌರವ್ ಎನ್.ಎಸ್., ಮಹಿಳಾ ಸೇವಾ ಸಮಾಜ, ಬಸವನಗುಡಿ, ಬೆಂಗಳೂರು. ( ಕನ್ಸರ್ವೇಷನ್ ಆಫ್ ಎನರ್ಜಿ )


*
ಶಿವಮೊಗ್ಗದಲ್ಲಿ ನಡೆದ ರಾಜ್ಯ ಮಟ್ಟದ ಪ್ರಾಜೆಕ್ಟ್ ವಸ್ತು ಪ್ರದರ್ಶನ ಮತ್ತು ಸ್ಪರ್ಧೆಯಲ್ಲಿ ವಿಜೇತರಾಗಿ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಉಡುಪಿ ಜಿಲ್ಲೆಯಿಂದ ಆಯ್ಕೆಯಾದವರೆಂದರೆ
1. ಅಭಿಜಿತ್ ಕಾಮತ್, ಶ್ರೀ ಅನಂತೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಉಡುಪಿ. ಗುರುಕಿರಣ್, ಸ.ಹಿ.ಪ್ರಾಥಮಿಕ ಶಾಲೆ, ಬೆಳ್ಳರ್ಪಾಡಿ, ಬ್ರಹ್ಮಾವರ ವಲಯ . (ಇಲೆಕ್ಟ್ರಿಸಿಟಿ ಪ್ರಾಜೆಕ್ಟ್ )
2. ಪವನ್ ಕಿಣಿ, ವಿವೇಕ ಪದವಿ ಪೂರ್ವ ಕಾಲೇಜು, ಕೋಟ. ( ಶೀಘ್ರ ಆಹಾರದ ಕಿಟ್ )
3. ಪ್ರದೀಪ್, ಸ.ಹಿ.ಪ್ರಾಥಮಿಕ ಶಾಲೆ, ಕೆಳಾರ್ಕಳಬೆಟ್ಟು, ಬ್ರಹ್ಮಾವರ ವಲಯ. ( ಕುರುಡರಿಗೆ ಸೆನ್ಸರಿಂಗ್ ಕೋಲು)
4. ಸಂಕೇತ್ ಡಿ ಪ್ರಭು, ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಕಾಪು. ( ಆನ್ ಲೈನ್ ವಾಟರ್ ಪ್ಯೂರಿಫಯರ್)
5. ಶರಧಿ ಶೆಟ್ಟಿ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಾರ್ಕಳ. ( ರೇನ್ ಸೆನ್ಸರಿಂಗ್)
6. ಶ್ರವಣ ಕುಮಾರ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಅಲೆವೂರು. ( ಬೆಳೆಗಳನ್ನು ಕ್ರಿಮಿಗಳಿಂದ ರಕ್ಷಣೆ)
7. ಶ್ರಾವ್ಯ, ಸ.ಹಿ.ಪ್ರಾಥಮಿಕ ಶಾಲೆ, ಬೋರ್ಗಲ್ ಗುಡ್ಡೆ, ಕಾರ್ಕಳ ವಲಯ. ( ಪ್ಲಾಸ್ಟಿಕ್ ರಿಸೈಕ್ಲಿಂಗ್)
8. ಸೌಜನ್ಯ, ಜನತಾ ಪ್ರೌಢ ಶಾಲೆ, ಹೆಮ್ಮಾಡಿ, ಬೈಂದೂರು ವಲಯ. ( ಹೊಗೆರಹಿತ ಒಲೆ )
9. ತುಷಾರ ಭಟ್, ವಿವೇಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಕೋಟ. ( ಆಧುನಿಕ ಕಾರ್ ಪಾರ್ಕಿಂಗ್ )
10. ವೀಣಾ ರೋಷನಿ ಪಿಂಟೋ, ಡಾ. ಎನ್.ಎಸ್.ಎ.ಎಮ್. ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ನಿಟ್ಟೆ ( ಮ್ಯಾನ್ವಲ್ ಆಪರೇಟೆಡ್ ಪ್ರಿಂಟರ್. )
11. ವಿಘ್ನೇಶ, ಯು.ಬಿ.ಎಂ.ಸಿ. ಅನುದಾನಿತ ಪ್ರೌಢ ಶಾಲೆ, ಕುಂದಾಪುರ. ( ತೆರೆದ ಬಾವಿಯಿಂದ ರಕ್ಷಣೆ )

7 ಕಾಮೆಂಟ್‌ಗಳು:

  1. ಎಲ್ಲಾ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ.

    ಪ್ರತ್ಯುತ್ತರಅಳಿಸಿ
  2. ಕು.ಶರಧಿ ಶೆಟ್ಟಿಗೆ ಅಭಿನಂದನೆಗಳು. ಇನ್ನಷ್ಟು ಉತ್ತಮ ಸಂಶೋಧನೆಗಳು ಇವಳಿಂದ ಸಮಾಜಕ್ಕೆ ಲಭ್ಯವಾಗಲಿ ಮತ್ತು ಈ ಮಗುವಿನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸುತ್ತೇನೆ.
    ಈ.ನಂಜಪ್ಪ
    ನಿವೃತ್ತ ಜಂಟಿ ನಿರ್ದೇಶಕರು, ಶಿಕ್ಷಣ ಇಲಾಖೆ
    ಹಾಗೂ ಸಮಾಲೋಚಕರು, ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು (ಆರ್.ಟಿ.ಇ.)

    ಪ್ರತ್ಯುತ್ತರಅಳಿಸಿ
  3. All the Best to your future Dear Student Sharadi.May god bless your Knowledge. And also want to say congrats to teachers who guided to you for this achievement.

    ಪ್ರತ್ಯುತ್ತರಅಳಿಸಿ