*
ವಿಠ್ಠಲ
ಭಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮಮ್ಮಟಗೇರಿಯ ಹುಡುಗ.
ವಯಸ್ಸು ಹನ್ನೊಂದೋ ಹನ್ನೆರಡೋ ಇರಬಹುದು.ಐದನೆಯ ತರಗತಿಯವರೆಗೂ ಮಮ್ಮಟಗೇರಿಯ ಪ್ರಾತಮಿಕ ಶಾಲೆಯಲ್ಲಿ ವ್ಯಾಸಂಗಮಾಡಿದ್ದೇನೆಂದು ಹೇಳುತ್ತಾನೆ.ಸಧ್ಯಕ್ಕೆ ಇವನ ವಾಸ ಕುಂದಾಪುರದ ಲೋಕೋಪಯೋಗಿ ಕಛೇರಿಯ ಗೋಡೌನಿನ ಗೋಡೆಯ ಸಂದಿನಲ್ಲಿ.ತಂದೆ,ತಾಯಿ ಇಬ್ಬರೂ ಕೆಲಸಕ್ಕೆ ಹೋಗುತ್ತಾರೆ.ಎರಡು ವರ್ಷದ ದೈಹಿಕ ಸವಾಲುಗಳುಳ್ಳ ತಂಗಿ ಲಕ್ಷ್ಮಿಯನ್ನು ವಿಠಲನೇ ನೋಡಿಕೊಳ್ಳಬೇಕಾದ್ದರಿಂದ ಅವನಿಗೆ ಶಾಲೆಗೆ ಹೋಗಲಾಗುತ್ತಿಲ್ಲ.
ಆದ್ಧರಿಂದ ವಿಠಲ ಔಟ್ ಆಫ್ ಸ್ಕೂಲ್.
ವಿಠಲ ಶಾಲೆಯಿಂದ ಹೊರಗಿರುವುದು ಐಸ್ ಕ್ರೀಮ್ ಮೇಲಿರುವ ಜೆಲ್ಲಿಹಣ್ಣಿನಂತೆ ತಟ್ಟನೆ ಕಣ್ಣಿಗೆ ಕಾಣುವ ಸತ್ಯ.ಆಳದಲ್ಲಿ ಬೇರೆ ಸಮಸ್ಯೆಗಳೇ ಇವೆ.ಇವುಗಳನ್ನು ಪರಿಹರಿಸುವವರು ಯಾರು? ಲಕ್ಷ್ಮಿಯನ್ನು ನೋಡಿಕೊಳ್ಳುವವರಿದ್ದರೆ ವಿಠಲ ಶಾಲೆಗೆ ಬರುತ್ತಾನೆ.ವಿಠಲ ಶಾಲೆಗೆ ಬರುವುದನ್ನೇ ಕಾಯುತ್ತಿದೆ ವಡೇರಹೋಬಳಿಯ ಸರಕಾರಿ ಶಾಲೆ.
*
ಕಳೆದ ವರ್ಷ ಶಾಲೆಗೆ ಬರಲು ಮನಸ್ಸಿರದ ಪ್ರಥ್ವಿರಾಜನನ್ನು ಮನವೊಲಿಸಲು ಕೊನೆಗೂ ಸಾಧ್ಯವಾಯಿತು.ಕಳೆದ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಆತ ಶಾಲೆಗೆ ನಿಯಮಿತವಾಗಿ ಬರುತ್ತಿದ್ದ.ಶಾಲೆಯ ಹೊರಗಿರುವ ವಿದ್ಯಾರ್ಥಿಗಳ ಪಟ್ಟಿಯಿಂದ ಹೊರಬಂದ ಪ್ರಥ್ವಿರಾಜ ಈಗ ಹೈಸ್ಕೂಲು ಸೇರಿದ್ದಾನೆ.ಇಂದು ವಡೇರಹೋಬಳಿಯ ಪಿ.ವಿ.ಎಸ್.ಸರೋಜಿನಿ ಮಧುಸೂದನ ಕುಶೆ ಸರಕಾರಿ ಪ್ರೌಢಶಾಲೆಗೆ ಭೇಟಿ ನೀಡಿದಾಗ ಪ್ರಥ್ವಿರಾಜ ಎಲ್ಲ ಮಕ್ಕಳಂತೆ ಕಲಿಕೆಯಲ್ಲಿ ತೊಡಗಿದ್ದ.
*
ಅಣ್ಣ ಪ್ರಥ್ವಿರಾಜ ಶಾಲೆಗೆ ಹೋಗಲು ಮನಸ್ಸು ಮಾಡಿದ್ದರೂ ತಂಗಿ ಸುಮಿತ್ರಾ ಶಾಲೆಯ ಕಡೆ ಇದುವರೆಗೂ ಮುಖಮಾಡಲಿಲ್ಲ. ನಾಳೆ ಬ್ಯಾಗು,ನೋಟ್ ಪುಸ್ತಕಗಳು,ಪೆನ್ನು,ಜೊಮೆಟ್ರಿ ಬಾಕ್ಸ್ ನೊಂದಿಗೆ ಶಾಲೆಯಲ್ಲಿ ನಿನಗಾಗಿ ಕಾದಿರುತ್ತೇವೆ ಎಂದಾಗ ಆಕೆ ಶಾಲೆಗೆ ಬರಲೊಪ್ಪಿದಳು.ನಾಳೆ ಏನಾಗುತ್ತದೋ ಗೊತ್ತಿಲ್ಲ.
ನಾವಂತೂ ಸುಮಿತ್ರಾ ಶಾಲೆಗೆ ಬರುತ್ತಾಳೆಂಬ ನಿರೀಕ್ಷೆಯಲ್ಲಿಯೇ ನಾಳೆಯ ಸೂರ್ಯೋದಯವನ್ನು ಸ್ವಾಗತಿಸಲಿದ್ದೇವೆ.
*
ನಾವೆಲ್ಲ ಮನೆಭೇಟಿ ಮಾಡುತ್ತಿರುವ ಸುದ್ದಿ ಕುಂದಾಪುರದ ಜೆ.ಎಲ್.ಬಿ ರಸ್ತೆಯಲ್ಲಿರುವ ವಿಷ್ಣುವಿಗೆ ಹೇಗೆ ಗೊತ್ತಾಯಿತೋ ಗೊತ್ತಿಲ್ಲ.ನಾವು ಬರುವ ಮುಂಚೆಯೇ ಆತ ಜಾಗ ಖಾಲಿ ಮಾಡಿದ್ದ.ಗರಟೆ,ಮಣ್ಣುಗಳೊಂದಿಗೆ ಆತ ಅದುವರೆಗೂ ಅಲ್ಲಿಯೇ ಆಡುತ್ತಿದ್ದ ನೆಂಬ ಕುರುಹುಗಳನ್ನಷ್ಟೇ ನೋಡಲು ನಮಗೆ ಸಾಧ್ಯವಾಯಿತು.ವಿಷ್ಣುವನ್ನು ಹುಡುಕುತ್ತಾ ಹೋದ ನಮಗೆ ಈವತ್ತು ಶಾಲೆಗೆ ಹೋಗದಿದ್ದ ಮೂವರು ಮಕ್ಕಳು ದೊರೆತರು.ಬಹುಷಃ ಅವರೆಲ್ಲ ಿಂದು ವಿಷ್ಣುವಿನೊಂದಿಗೆ ಅಡುಗೆ ಆಟ ಆಡುತ್ತದ್ದಿರಬಹುದು!
*
ಹಿಂದಿನ ಬಾರಿ ಇದೇ ತರ ಮಕ್ಕಳನ್ನು ಹುಡುಕುತ್ತಾ ಹೋದಾಗ ಕುಂದಾಪುರದ ಕೆ.ಎಸ್ .ಆರ್ ಟಿ.ಸಿ ಬಸ್ ಸ್ಟ್ಯಾಂಡ ಬಳಿಯ ಟೆಂಟಿನಲ್ಲಿ ಯುನಿಫಾರ್ಮನೊಂದಿಗೆ ಕಾಣಿಸಿಕೊಂಡಿದ್ದ ಮಂಜುಳಾ ಇಂದು ಸಿಗಲಿಲ್ಲ.ಅವಳಷ್ಟೇ ಅಲ್ಲ ಅವಳಿದ್ದ ಟೆಂಟ್ ಕೂಡಾ ಅಲ್ಲಿರಲಿಲ್ಲ.ಬಹುಷಃ ಅವಳೂರಲ್ಲಿ ಮಳೆ ಬಂದಿರಬಹುದು...ಮಣ್ಣಿನೊಂದಿಗೆ ಮತ್ತು ಬದುಕಿನೊಂದಿಗೆ ಗುದ್ದಾಡಲು ಮತ್ತೆ ಅವರೂರನ್ನೇ ಅವಳಪ್ಪ ಅಮ್ಮ ಆರಿಸಿಕೊಂಡಿರಬಹುದು!

ಇಷ್ಟೆಲ್ಲ ಹೇಳಿದೆನಲ್ಲ?!
ಇದು ಈವತ್ತು (10/7/2013) ಕುಂದಾಪುರದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಗೋಪಾಲ ಶೆಟ್ಟಿ ಇವರ ಮಾರ್ಗದರ್ಶನದಲ್ಲಿ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಶೋಭಾ ಶೆಟ್ಟಿ ಮತ್ತವರ ತಂಡ ಶಾಲೆಗೆ ಮಕ್ಕಳನ್ನು ಕರೆತರಲು ಮಾಡಿದ ವಿಶೇಷ ದಾಖಲಾತಿ ಆಂದೋಲನ.ಈ ಆಂದೋಲನದಲ್ಲಿ ಸರ್ವ ಶಿಕ್ಷಣ ಅಭಿಯಾನದ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿಗಳು,ಶಿಶು ಅಭಿವೃದ್ಧಿ ಅಧಿಕಾರಿಗಳು,ಕಾರ್ಮಿಕ ಅಧಿಕಾರಿಗಳು,ತಾಲೂಕು ವೈದ್ಯಾಧಿಕಾರಿಗಳೂ ಭಾಗವಹಿಸಿದ್ದರು.ಈ ವಿಶೇಷ ದಾಖಲಾತಿ ಆಂದೋಲನವು ಫೋಟೋ ,ಜಾಥಾ,ದಾಖಲೆಗಳಲ್ಲೇ ಮುಗಿದುಹೋಗದೇ ಫಲಪ್ರಧವಾಗಿ ಕೊನೆಗೊಂಡಿದೆ. ಶಾಲೆಯಿಂದ ಹೊರಗಿರುವ ಮಕ್ಕಳನ್ನು ಮತ್ತೆ ಮುಖ್ಯವಾಹಿನಿಗೆ ಸೇರಿಸುವ ಕಾಳಜಿ ಈ ಕಾರ್ಯಕ್ರಮದಲ್ಲಿ ಎದ್ದುಕಾಣುತ್ತಿತ್ತು.
ಲೇಖನ
ಉದಯ ಗಾಂವಕಾರ
ನಿಮ್ಮ ಬ್ಲಾಗ್, ಬರಹ ಎರಡೂ ಚೆನ್ನಾಗಿದೆ. ಅಭಿನಂದನೆಗಳು.
ಪ್ರತ್ಯುತ್ತರಅಳಿಸಿಈ.ನಂಜಪ್ಪ
ನಿವೃತ್ತ ಸಹ ನಿರ್ದೇಶಕರು,
ಸಮಾಲೋಚಕರು, ಆರ್.ಟಿ.ಇ., ಸರ್ವ ಶಿಕ್ಷಣ ಅಭಿಯಾನ
ಕರ್ನಾಟಕ
ಧನ್ಯವಾದಗಳು ಸರ್.
ಪ್ರತ್ಯುತ್ತರಅಳಿಸಿ